ಅಗ್ಘವಣಿಯನೆ ತುಂಬಿ
ಪುಷ್ಪವನೆ ತಂದು ಪೂಜಿಸಿ ಲಯಕ್ಕೊಳಗಾದರು. ಜನಮರುಳೋ ಜಾತ್ರೆಮರುಳೊ ಅಘ್ಘವಣಿಯನೆ ತುಂಬಿದ ಜಲ ಬತ್ತಿಹೋಯಿತ್ತು
ಪುಷ್ಪವನೆ ತಂದು ತಂದು ಗಿಡು ಅಡವಿ ಕೂಡಿತ್ತು. ನೀ ಪೂಜಿಸಿದ ಪೂಜೆ ಗಿಡುವು ಮಡವಿಗಲ್ಲದೆ ನಿನಗೆಲ್ಲಿಹುದೋ ? ಮಾಡಿ ಮಾಡಿ ಮಡಕೆ ಕೇಡು. ಮಾಡಿ ಮನ ಮರುಗದೆ
ನೀಡಿ ನಿಜವಿಲ್ಲದೆ ಅಣ್ಣಗಳ ಕೆಟ್ಟ ಕೇಡು ನೋಡಾ ಮಹಾದಾನಿ ಕೂಡಲಚನ್ನಸಂಗಮದೇವಾ.