ಅಗ್ಘವಣಿಯನೆ ತುಂಬಿ, ಪುಷ್ಪವನೆ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಅಗ್ಘವಣಿಯನೆ ತುಂಬಿ
ಪುಷ್ಪವನೆ ತಂದು ಪೂಜಿಸಿ ಲಯಕ್ಕೊಳಗಾದರು. ಜನಮರುಳೋ ಜಾತ್ರೆಮರುಳೊ ಅಘ್ಘವಣಿಯನೆ ತುಂಬಿದ ಜಲ ಬತ್ತಿಹೋಯಿತ್ತು
ಪುಷ್ಪವನೆ ತಂದು ತಂದು ಗಿಡು ಅಡವಿ ಕೂಡಿತ್ತು. ನೀ ಪೂಜಿಸಿದ ಪೂಜೆ ಗಿಡುವು ಮಡವಿಗಲ್ಲದೆ ನಿನಗೆಲ್ಲಿಹುದೋ ? ಮಾಡಿ ಮಾಡಿ ಮಡಕೆ ಕೇಡು. ಮಾಡಿ ಮನ ಮರುಗದೆ
ನೀಡಿ ನಿಜವಿಲ್ಲದೆ ಅಣ್ಣಗಳ ಕೆಟ್ಟ ಕೇಡು ನೋಡಾ ಮಹಾದಾನಿ ಕೂಡಲಚನ್ನಸಂಗಮದೇವಾ.