ಅಚಲಸಿಂಹಾಸನವನಿಕ್ಕಿ; ನಿಶ್ಚಲ ಮಂಟಪದ ಸಂಚದೋವರಿಯೊಳಗೆ; ರುಚಿಗಳೆಲ್ಲವ ನಿಲಿಸಿ_ ಪಂಚರತ್ನದ ಶಿಖರ ಮಿಂಚುಕೋಟಿಯ ಕಳಸ ವಚನ ವಿಚಿತ್ರದ ಪುಷ್ಪದ ರಚನೆ[ಯ] ನವರಂಗದಲ್ಲಿ ಖೇಚರಾದಿಯ ಗಮನ. ವಿಚಾರಿಪರ ನುಂಗಿ._ಗುಹೇಶ್ವರ ನಿಂದ ನಿಲುವು ಸಚರಾಚರವ ನುಂಗಿತ್ತು