Pages(key to [[Help:Page Status{{!}}Page Status]])
ಆರಾರರಿಂದ ಮೀರಿ ತೋರುವ ಸೀಮೆ ನಿಸ್ಸೀಮೆ ನೋಡಾ. ಆ ಸೀಮೆಯರಸು ಅನಾಹತನು. ಆವ ಆವರಣವೂ ಇಲ್ಲದ ನಿರಾವರಣಂಗೆ ಮಾಯಾವರಣವಿಲ್ಲದ ನಿರ್ಮಾಯನೆ ಅಂಗವಾಗಿಪ್ಪನು. ಈ ಲಿಂಗಾಂಗ ಸಂಯೋಗವ ತತ್ತ್ವಮಸ್ಯಾದಿ ವಾಕ್ಯಾರ್ಥವೆಂಬ ವಾಚಾಳಿಗೆ ತಂದು ಹೇಳಲಿಲ್ಲ ವಾಚಾತೀತನಾದ ಶಿವೈಕ್ಯನು ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.