Library-logo-blue-outline.png
View-refresh.svg
Transclusion_Status_Detection_Tool

ಆರಾರರಿಂದ ಮೀರಿ ತೋರುವ

ವಿಕಿಸೋರ್ಸ್ ಇಂದ
Jump to navigation Jump to searchPages   (key to Page Status)   


ಆರಾರರಿಂದ ಮೀರಿ ತೋರುವ ಸೀಮೆ ನಿಸ್ಸೀಮೆ ನೋಡಾ. ಆ ಸೀಮೆಯರಸು ಅನಾಹತನು. ಆವ ಆವರಣವೂ ಇಲ್ಲದ ನಿರಾವರಣಂಗೆ ಮಾಯಾವರಣವಿಲ್ಲದ ನಿರ್ಮಾಯನೆ ಅಂಗವಾಗಿಪ್ಪನು. ಈ ಲಿಂಗಾಂಗ ಸಂಯೋಗವ ತತ್ತ್ವಮಸ್ಯಾದಿ ವಾಕ್ಯಾರ್ಥವೆಂಬ ವಾಚಾಳಿಗೆ ತಂದು ಹೇಳಲಿಲ್ಲ ವಾಚಾತೀತನಾದ ಶಿವೈಕ್ಯನು
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.