ಈ ಆರು ಸಹಿತ ಆಚಾರ ಆಚಾರಸಹಿತ ಗುರು ಗುರುಸಹಿತ ಲಿಂಗ ಲಿಂಗಸಹಿತ ಜಂಗಮ ಜಂಗಮಸಹಿತ ಪ್ರಸಾದ ಪ್ರಸಾದಸಹಿತ ಮಹಾಲಿಂಗ. ಇಂತೀ ಎಲ್ಲ ಸ್ಥಲಂಗಳು ತಾನಾಗಬಲ್ಲಡೆ ಕೂಡಲಚೆನ್ನಸಂಗಾ ಲಿಂಗೈಕ್ಯವು.