ಉಭಯ ಕಾಮ ಉಭಯ ಶಕ್ತಿ ಉಭಯ ಆಶ್ರಮವು_ ಅನಾಶ್ರಮವು ಉಭಯ ತಾನೆ ಪ್ರಸಾದಿ ಉಭಯನಾಮದ ಮೇಲೆ ನಾಮವಾದುದನು ಲಿಂಗದೇಹಿಯೆಂಬಾತಂಗರಿಯಬಾರದು. ಇದು ಕಾರಣ ಕೂಡಲಚೆನ್ನಸಂಗಾ ನಿಮ್ಮ ಪ್ರಸಾದಿಗಲ್ಲದೆ ಅರಿಯಬಾರದು.