ವಿಷಯಕ್ಕೆ ಹೋಗು

ಉಭಯ ಕಾಮ, ಉಭಯ

ವಿಕಿಸೋರ್ಸ್ದಿಂದ


ಶೀರ್ಷಿಕೆ: vachana saahitya
ವರ್ಷ: 1144-1168 AD
ಪ್ರಕಾಶಕರು: anubhava mantapa
ಮೂಲ: vachana saahitya


ಉಭಯ ಕಾಮ
ಉಭಯ ಶಕ್ತಿ
ಉಭಯ ಆಶ್ರಮವು_ ಅನಾಶ್ರಮವು
ಉಭಯ ತಾನೆ ಪ್ರಸಾದಿ ಉಭಯನಾಮದ ಮೇಲೆ ನಾಮವಾದುದನು ಲಿಂಗದೇಹಿಯೆಂಬಾತಂಗರಿಯಬಾರದು. ಇದು ಕಾರಣ
ಕೂಡಲಚೆನ್ನಸಂಗಾ ನಿಮ್ಮ ಪ್ರಸಾದಿಗಲ್ಲದೆ ಅರಿಯಬಾರದು.