ಎನ್ನ ತನುಮನವೆರಡನೂ ಗುರು ಕಳೆದು ಲಿಂಗದಲಿ ಏಕವ ಮಾಡಿದನಾಗಿ ಎನ್ನ ಅಂತರಂಗ ಬಹಿರಂಗವೆರಡೂ ನಿಮ್ಮವು ನೋಡಾ ! ನಿಮ್ಮ ಅಂತರಂಗದೊಳಗೆ ನಿಮ್ಮನೆ ಇಂಬಿಟ್ಟುಕೊಂಬೆ ನಿಮ್ಮ ಬಹಿರಂಗದೊಳಗೆ ನಿಮ್ಮನೆ ನೀವಾಗಿ ಪೂಜಿಸುವೆ ನಿಮ್ಮ ಅರಿವಿಂದ ನಿಮ್ಮನೆ ಅರಿವೆ ಕಾಣಾ ಕೂಡಲಸಂಗಮದೇವಾ.