ವಿಷಯಕ್ಕೆ ಹೋಗು

ಎನ್ನ ತನುಮನವೆರಡನೂ ಗುರು ಕಳೆದು ಲಿಂಗದಲಿ ಏಕವ ಮಾಡಿದನಾಗಿ

ವಿಕಿಸೋರ್ಸ್ದಿಂದ
ಲೇಖಕರು: ಬಸವಣ್ಣ
ಶೀರ್ಷಿಕೆ: vachana saahitya
ವರ್ಷ: 1191 AD
ಪ್ರಕಾಶಕರು: anubhava mantapa
ಮೂಲ: vachana saahitya

ಎನ್ನ ತನುಮನವೆರಡನೂ ಗುರು ಕಳೆದು ಲಿಂಗದಲಿ ಏಕವ ಮಾಡಿದನಾಗಿ
ಎನ್ನ ಅಂತರಂಗ ಬಹಿರಂಗವೆರಡೂ ನಿಮ್ಮವು ನೋಡಾ ! ನಿಮ್ಮ ಅಂತರಂಗದೊಳಗೆ ನಿಮ್ಮನೆ ಇಂಬಿಟ್ಟುಕೊಂಬೆ
ನಿಮ್ಮ ಬಹಿರಂಗದೊಳಗೆ ನಿಮ್ಮನೆ ನೀವಾಗಿ ಪೂಜಿಸುವೆ
ನಿಮ್ಮ ಅರಿವಿಂದ ನಿಮ್ಮನೆ ಅರಿವೆ ಕಾಣಾ
ಕೂಡಲಸಂಗಮದೇವಾ.