ಒಳಗೆಂದೇನು? ಹೊರಗೆಂದೇನು? ಅರುಹೆಂದೇನು? ಮರಹೆಂದೇನು? ತಾನೆಂದೇನು? ಇದಿರೆಂದೇನು? ಬರಿಯ ಬಯಲುಭ್ರಮೆಗೊಳಗಾಯಿತ್ತಲ್ಲಾ ಈ ಲೋಕ. ಒಳಗು ತಾನೆ ಹೊರಗು ತಾನೆ. ಅರುಹು ತಾನೆ ಮರಹು ತಾನೆ. ತೆರಹಿಲ್ಲದ ಪರಿಪೂರ್ಣ ಪರಾಪರವು ತಾನೇ ನೋಡಾ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.