ಒಳಗೆಂದೇನು? ಹೊರಗೆಂದೇನು? ಅರುಹೆಂದೇನು?

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಒಳಗೆಂದೇನು? ಹೊರಗೆಂದೇನು? ಅರುಹೆಂದೇನು? ಮರಹೆಂದೇನು? ತಾನೆಂದೇನು? ಇದಿರೆಂದೇನು? ಬರಿಯ ಬಯಲುಭ್ರಮೆಗೊಳಗಾಯಿತ್ತಲ್ಲಾ ಈ ಲೋಕ. ಒಳಗು ತಾನೆ
ಹೊರಗು ತಾನೆ. ಅರುಹು ತಾನೆ
ಮರಹು ತಾನೆ. ತೆರಹಿಲ್ಲದ ಪರಿಪೂರ್ಣ ಪರಾಪರವು ತಾನೇ ನೋಡಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.