ಓಡೆತ್ತ ಬಲ್ಲುದು ಅವಲಕ್ಕಿಯ ಸವಿಯ ಕೋಡುಗ ಬಲ್ಲುದೆ ಸೆಳೆಮಂಚದ ಸುಖವ ಕಾಗೆ ನಂದನವನದೊಳಗಿದ್ದಡೇನು ಕೋಗಿಲೆಯಾಗಬಲ್ಲುದೆ ಹೇಳಾ ಕೊಳನ ತಡಿಯಲೊಂದು ಹೊರಸು ಕುಳ್ಳಿರ್ದಡೇನು ಕಳಹಂಸಿಯಾಗಬಲ್ಲುದೆ ಕೂಡಲಸಂಗಮದೇವಾ 98