ಕಂಗಳ ನೋಟ ಕರಸ್ಥಳದ ಪ್ರಾಣ ಮನದೊಳಗೆ ಪರಿಣಾಮವ ತೋರುತ್ತಿದೆ ನೋಡಾ ! ನಡೆದಡೆ ಹೆಜ್ಜೆಯಿಲ್ಲ ನಿಂದಡೆ ನೆಳಲಿಲ್ಲ ಸುಳುಹಿನೊಳಗೊಂದು ಅತಿಶಯದ ಸುಳುಹು ನೋಡಾ ! ತೆರೆಯ ಮರೆಯ ಪರಶಿವನು ನಡೆಗಲಿತು ಬಪ್ಪ ಕರುಣವ ನೋಡಾ ! ಸಂಗನಬಸವಣ್ಣಾ ಕೂಡಲಚೆನ್ನಸಂಗಮದೇವರು ಸಾಕ್ಷಿಯಾಗಿ ಪ್ರಭುದೇವರ ಬರುವು ತಪ್ಪದು.