ಕಣ್ಣ ಕೋಪಕ್ಕೆ ಮುಂದರಿಯದೆ ನುಡಿದು ಮನಮಚ್ಚಿ ಮರುಳಾದೆ ನೋಡವ್ವಾ ! ಕೇಳು ಕೇಳವ್ವಾ ಕೆಳದಿ ಸಖಿಯರಿಲ್ಲದೆ ಸುಖವ ಬಯಸಿದಡೆ ದೊರಕೊಂಬುದೆ ಹೇಳಾ. ಎನ್ನ ಮುನಿಸು ಎನ್ನಲ್ಲೆ ಅಡಗಿತ್ತು ಇನ್ನು ಬಾರಯ್ಯಾ ಕೂಡಲಸಂಗಯ್ಯಾ. 520