ಅನಾಚಾರದ ಕಾಯಕವ ಮಾಡಿ ಪದಾರ್ಥವನೆ ಗಳಿಸಿ ಆ ಪದಾರ್ಥವನೆ ಪಾಕವ ಮಾಡಿ ಓಗರವ ಮಾಡುವುದು ಆ ಓಗರವನೆ ಪ್ರಸಾದವ ಮಾಡಿ ಆ ಪ್ರಸಾದವನೆ ಓಗರವ ಮಾಡಿ! ಇದು ಕಾರಣ ಕೂಡಲಚೆನ್ನಸಂಗನ ಶರಣನು ಅರ್ಪಿತವಲ್ಲದೆ ಮಾಡನು.