ಅನಾದಿಮಲಿನರಾಗಿ ಆದಿ ನಿರ್ಮಲರಾದೆವೆಂದು ನಿಮ್ಮ ಶರಣರಿಗೆ ಮಾಯಾಕರ್ಮವ ಕಲ್ಪಿಸಿ ನುಡಿವ ಮಾದಿಗರನೆನಗೊಮ್ಮೆ ತೋರದಿರು. ಇದು ಕಾರಣ ಅನಾದಿ ನಿತ್ಯ ನಿಶ್ಚಿಂತ ನಿರ್ಮಲ ನಿರಾವರಣರು ನಿಮ್ಮ ಶರಣರು ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.