Pages(key to [[Help:Page Status{{!}}Page Status]])
ಗಗನವೆ ಅಂಗವಾದ ಶರಣಂಗೆ ಸುಜ್ಞಾನವೆ ಹಸ್ತ. ಆ ಹಸ್ತಕ್ಕೆ ಪರಾಶಕ್ತಿ ಆ ಶಕ್ತಿಗೆ ಪ್ರಸಾದಲಿಂಗ ಆ ಲಿಂಗಕ್ಕೆ ಶ್ರವಣೇಂದ್ರಿಯವೆ ಮುಖ ಆ ಮುಖಕ್ಕೆ ಸುಶಬ್ದಪದಾರ್ಥ; ಆ ಪದಾರ್ಥವನು ಕರ್ಣದಲ್ಲಿಹ ಪ್ರಸಾದಲಿಂಗಕ್ಕೆ ಆನಂದಭಕ್ತಿಯಿಂದರ್ಪಿಸಿ ಆ ಸುಶಬ್ದಪ್ರಸಾದವನು ಪಡೆದು ಸುಖಿಸುವಾತನೆ ಶರಣನು ನೋಡಾ ಅಖಂಡೇಶ್ವರಾ.