ಗಗನವೆ ಹಸ್ತಕ್ಕೆ ಅಂಗವಾದ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಗಗನವೆ ಅಂಗವಾದ ಶರಣಂಗೆ ಸುಜ್ಞಾನವೆ ಹಸ್ತ. ಆ ಹಸ್ತಕ್ಕೆ ಪರಾಶಕ್ತಿ
ಆ ಶಕ್ತಿಗೆ ಪ್ರಸಾದಲಿಂಗ
ಆ ಲಿಂಗಕ್ಕೆ ಶ್ರವಣೇಂದ್ರಿಯವೆ ಮುಖ
ಆ ಮುಖಕ್ಕೆ ಸುಶಬ್ದಪದಾರ್ಥ; ಆ ಪದಾರ್ಥವನು ಕರ್ಣದಲ್ಲಿಹ ಪ್ರಸಾದಲಿಂಗಕ್ಕೆ ಆನಂದಭಕ್ತಿಯಿಂದರ್ಪಿಸಿ
ಆ ಸುಶಬ್ದಪ್ರಸಾದವನು ಪಡೆದು ಸುಖಿಸುವಾತನೆ ಶರಣನು ನೋಡಾ ಅಖಂಡೇಶ್ವರಾ.