ಗುರುಕರಜಾತನಾದೆನಾಗಿ ಆಣವಮಲ ಹೋಯಿತ್ತಯ್ಯ ಎನಗೆ. ಭಕ್ತಜನಬಂಧುತ್ವವಾಯಿತ್ತಾಗಿ ಮಾಯಾಮಲ ಹೋಯಿತ್ತಯ್ಯ ಎನಗೆ. ದ್ರವ್ಯವ ತ್ರಿಲಿಂಗದ ಸೊಮ್ಮೆಂದರಿದೆನಾಗಿ ಕಾರ್ಮಿಕಮಲ ಹೋಯಿತ್ತಯ್ಯ ಎನಗೆ. ಇಂತೀ ಮಲತ್ರಯಂಗಳ ಬಲೆಯ ಹರಿದು ನಿಮ್ಮ ಕರುಣದ ಕಂದನಾದೆನಯ್ಯ ಅಖಂಡೇಶ್ವರಾ.