ಗುರುಕರಜಾತನಾದೆನಾಗಿ, ಹೋಯಿತ್ತಯ್ಯ ಆಣವಮಲ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಗುರುಕರಜಾತನಾದೆನಾಗಿ
ಆಣವಮಲ ಹೋಯಿತ್ತಯ್ಯ ಎನಗೆ. ಭಕ್ತಜನಬಂಧುತ್ವವಾಯಿತ್ತಾಗಿ
ಮಾಯಾಮಲ ಹೋಯಿತ್ತಯ್ಯ ಎನಗೆ. ದ್ರವ್ಯವ ತ್ರಿಲಿಂಗದ ಸೊಮ್ಮೆಂದರಿದೆನಾಗಿ
ಕಾರ್ಮಿಕಮಲ ಹೋಯಿತ್ತಯ್ಯ ಎನಗೆ. ಇಂತೀ ಮಲತ್ರಯಂಗಳ ಬಲೆಯ ಹರಿದು ನಿಮ್ಮ ಕರುಣದ ಕಂದನಾದೆನಯ್ಯ ಅಖಂಡೇಶ್ವರಾ.