ಗುರುಲಿಂಗ
ಶಿವಲಿಂಗ
ಜಂಗಮಲಿಂಗ
ಪ್ರಸಾದಲಿಂಗವೆಂಬ ಅಪಸ್ಮಾರಿಗಳ ಮಾತ ಕೇಳಾಗದು. ಅದೆಂತೆಂದಡೆ; ಅಂಗದ ಮೇಲೆ ಒಬ್ಬ ಗಂಡ
ಮನೆಯೊಳಗೆ ಒಬ್ಬ ಗಂಡ- ಹಿತ್ತಲೊ?ಗೊಬ್ಬ ಗಂಡ
ಮುಂಚೆಯಲೊಬ್ಬ ಗಂಡ- ಇಂತೀ ಚತುವಿರ್ಧ ಗಂಡರು ಎಂಬ ಸತಿಯರ ಲೋಕದವರು ಮೆಟ್ಟಿ ಮೂಗಕೊಯ್ಯದೆ ಮಾಬರೆ ? ಕೂಡಲಚೆನ್ನಸಂಗಮದೇವಾ ಪ್ರಾಣಲಿಂಗವಿರ್ದುದ ಎತ್ತಲೆಂದರಿಯರು