Pages(key to [[Help:Page Status{{!}}Page Status]])
ಗುರುವುಳ್ಳಾತ ಶಿಷ್ಯನಲ್ಲ ಪ್ರಸಾದವುಳ್ಳಾತ ಭಕ್ತನಲ್ಲ. ಲಿಂಗೈಕ್ಯನಾದರೆ ಸ್ಥಾವರಲಿಂಗ ವಿರೋಧಿಯಾಗಿರಬೇಕು. ಕಾಯಕ್ಕೆ ಸಾಹಿತ್ಯವೆಲ್ಲಿಯಾದರೆಯೂ ಉಂಟು ಆತ್ಮಸಾಹಿತ್ಯವಪೂರ್ವ. ಆಚಾರಸಾಹಿತ್ಯ ಲೋಕ ಅನಾಚಾರಸಾಹಿತ್ಯ ಶರಣ ಇದು ಕಾರಣ ಕೂಡಲಚೆನ್ನಸಂಗಯ್ಯಾ ನಾನು ಅನಾಚಾರಿಯಾದ ಕಾರಣ ಎನಗೆ ಪ್ರಸಾದ ನೆಲೆಗೊಂಡಿತ್ತು.