ಗುರುವುಳ್ಳಾತ ಶಿಷ್ಯನಲ್ಲ, ಪ್ರಸಾದವುಳ್ಳಾತ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಗುರುವುಳ್ಳಾತ ಶಿಷ್ಯನಲ್ಲ
ಪ್ರಸಾದವುಳ್ಳಾತ ಭಕ್ತನಲ್ಲ. ಲಿಂಗೈಕ್ಯನಾದರೆ ಸ್ಥಾವರಲಿಂಗ ವಿರೋಧಿಯಾಗಿರಬೇಕು. ಕಾಯಕ್ಕೆ ಸಾಹಿತ್ಯವೆಲ್ಲಿಯಾದರೆಯೂ ಉಂಟು
ಆತ್ಮಸಾಹಿತ್ಯವಪೂರ್ವ. ಆಚಾರಸಾಹಿತ್ಯ ಲೋಕ
ಅನಾಚಾರಸಾಹಿತ್ಯ ಶರಣ
ಇದು ಕಾರಣ ಕೂಡಲಚೆನ್ನಸಂಗಯ್ಯಾ ನಾನು ಅನಾಚಾರಿಯಾದ ಕಾರಣ ಎನಗೆ ಪ್ರಸಾದ ನೆಲೆಗೊಂಡಿತ್ತು.