ಗುರುಸೇವೆಯಲ್ಲಿ ತನು ಸವೆದು ಲಿಂಗಪೂಜೆಯಲ್ಲಿ ಮನ ಸವೆದು ಜಂಗಮದಾಸೋಹದಲ್ಲಿ ಧನ ಸವೆದು ಇಂತೀ ತ್ರಿವಿಧಸಂಪತ್ತು ನೆಲೆಗೊಂಡ ಸದ್ಭಕ್ತಂಗೆ ನಮೋ ನಮೋ ಎಂಬೆನಯ್ಯ ಅಖಂಡೇಶ್ವರಾ.