ವಿಷಯಕ್ಕೆ ಹೋಗು

ಗುರುಸ್ಥಲದ ಕೂಡಬಲ್ಲಡೆ ಗಂಭೀರವಸ್ತುವ

ವಿಕಿಸೋರ್ಸ್ದಿಂದ


Title vachana saahitya
Author ಷಣ್ಮುಖಸ್ವಾಮಿ
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ಗುರುಸ್ಥಲದ
ಗಂಭೀರವಸ್ತುವ
ಕೂಡಬಲ್ಲಡೆ
ಗುರುಸ್ಥಲದವರೆಂಬೆನು.
ಚರಸ್ಥಲದ
ಚಿನ್ಮಯಶಿವನ
ಕೂಡಬಲ್ಲಡೆ
ಚರಸ್ಥಲದವರೆಂಬೆನು.
ಪರಸ್ಥಲದ
ಪರಾತ್ಪರ
ಪರಬ್ರಹ್ಮವ
ಕೂಡಬಲ್ಲಡೆ
ಪರಸ್ಥಲದವರೆಂಬೆನು.
ಇಂತೀ
ಭೇದವನರಿಯದೆ
ಹರನ
ವೇಷವ
ಧರಿಸಿ
ನರನ
ಓಲೈಸುವ
ಬರಿ
ಮೂರ್ಖರನೇನೆಂಬೆನಯ್ಯಾ
ಅಖಂಡೇಶ್ವರಾ
?