ಚಿತ್ತದೊಳಗಣ ವಸ್ತು ಮುತ್ತಿನಂತಿಪ್ಪುದಯ್ಯಾ. ಚಿತ್ತೇ ಚಿಪ್ಪು ಮುತ್ತೇ ವಸ್ತುವೆಂಬ ಯುಕ್ತಿಯನಾರೂ ತಿಳಿಯರಲ್ಲಾ. ಚಿಪ್ಪಳಿದು ಮತ್ತೆ ಬೆರೆಸಲಾಗಿ ನಿತ್ಯತ್ವ ಪದವಾಯಿತ್ತೆಂಬೆನು ಕಾಣಾ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.