Pages(key to [[Help:Page Status{{!}}Page Status]])
ಜ್ಞಾನ ಸುಜ್ಞಾನ ಕೈವಲ್ಯಜ್ಞಾನ: ಜ್ಞಾನ ತನುವಿನ ಪರಿಣಾಮ ಸುಜ್ಞಾನ ಪ್ರಾಣದ ಪರಿಣಾಮ ಕೈವಲ್ಯಜ್ಞಾನ ಮನದ ಪರಿಣಾಮ. ಗಮನದ ಭಾವದರಿವು ತ್ರಿವಿಧ: ವೈಲ ವೈರಂಭಣ ಮುಖಪ್ರಭಂಜನ. ಅಂತರ್ವಹ ವಾಯು ಭಾವದ ಚರಿತ್ರ. ಇದರ ಭೇದವ ಕೂಡಲಚೆನ್ನಸಂಗಾ ನಿಮ್ಮ ಶರಣನಲ್ಲದೆ ಕುಹಕಯೋಗಿಗಳವರೆತ್ತ ಬಲ್ಲರು ?