ತಂದೆಯಿಲ್ಲದ ತಾಯಿಯಿಲ್ಲದ ಹೆಸರಿಲ್ಲದ ಕುಲವಿಲ್ಲದ ಹುಟ್ಟಿಲ್ಲದ ಹೊಂದಿಲ್ಲದ ಅಯೋನಿಸಂಭವ ನೀನಾದಕಾರಣ ನಿನ್ನ ನಾನು ನಿಃಕಲಲಿಂಗವೆಂದೆನಯ್ಯಾ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.