ವಿಷಯಕ್ಕೆ ಹೋಗು

ತನು ಲಿಂಗವಾದ ಬಳಿಕ

ವಿಕಿಸೋರ್ಸ್ದಿಂದ


Title vachana saahitya
Author Tomtada Siddalingeshwara ShivaYogigaLu
Year 1550-1600 AD
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ತನು ಲಿಂಗವಾದ ಬಳಿಕ ವಿಕಾರವುಂಟೆ? ಮನ ಲಿಂಗವಾದ ಬಳಿಕ ಮಾಯವುಂಟೆ ಅಯ್ಯ? ಭಾವ ಲಿಂಗವಾದ ಬಳಿಕ ಭ್ರಮೆಯುಂಟೆ? ಕಾಯ ಲಿಂಗವಾದ ಬಳಿಕ ಕಳವಳವೆಲ್ಲಿಯದೊ? ಜೀವ ಲಿಂಗವಾದ ಬಳಿಕ ಉಪಾಧಿಯುಂಟೇ ಅಯ್ಯ? ಪ್ರಾಣ ಲಿಂಗವಾದ ಬಳಿಕ ಪ್ರಳಯವಿಲ್ಲ ಕಾಣಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.