Pages(key to [[Help:Page Status{{!}}Page Status]])
ತನು ಲಿಂಗವಾದ ಬಳಿಕ ವಿಕಾರವುಂಟೆ? ಮನ ಲಿಂಗವಾದ ಬಳಿಕ ಮಾಯವುಂಟೆ ಅಯ್ಯ? ಭಾವ ಲಿಂಗವಾದ ಬಳಿಕ ಭ್ರಮೆಯುಂಟೆ? ಕಾಯ ಲಿಂಗವಾದ ಬಳಿಕ ಕಳವಳವೆಲ್ಲಿಯದೊ? ಜೀವ ಲಿಂಗವಾದ ಬಳಿಕ ಉಪಾಧಿಯುಂಟೇ ಅಯ್ಯ? ಪ್ರಾಣ ಲಿಂಗವಾದ ಬಳಿಕ ಪ್ರಳಯವಿಲ್ಲ ಕಾಣಾ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.