ತನುವ ಕೊಟ್ಟೆನೆಂದು ನುಡಿದು ಗುರುವಚನಕ್ಕೆ ದೂರವಾದೆ ಮನವ ಕೊಟ್ಟೆನೆಂದು ನುಡಿದು ಲಿಂಗಮುಖಕ್ಕೆ ದೂರವಾದೆ ಧನವ ಕೊಟ್ಟೆನೆಂದು ನುಡಿದು ಜಂಗಮಮುಖಕ್ಕೆ ದೂರವಾದೆ ಕೂಡಲಸಂಗಮದೇವಯ್ಯಾ ನಿಮಗೆ ಮಾಡಿದೆನೆಂದು ನುಡಿದು ಕೆಟ್ಟ ಕೇಡಿಂಗೆ ಕಡೆಯಿಲ್ಲ.