ತನುವ ಕೊಟ್ಟೆನೆಂದು ನುಡಿದು,

ವಿಕಿಸೋರ್ಸ್ ಇಂದ
Jump to navigation Jump to search


Transclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)

ತನುವ ಕೊಟ್ಟೆನೆಂದು ನುಡಿದು
ಗುರುವಚನಕ್ಕೆ ದೂರವಾದೆ
ಮನವ ಕೊಟ್ಟೆನೆಂದು ನುಡಿದು
ಲಿಂಗಮುಖಕ್ಕೆ ದೂರವಾದೆ
ಧನವ ಕೊಟ್ಟೆನೆಂದು ನುಡಿದು
ಜಂಗಮಮುಖಕ್ಕೆ ದೂರವಾದೆ
ಕೂಡಲಸಂಗಮದೇವಯ್ಯಾ
ನಿಮಗೆ ಮಾಡಿದೆನೆಂದು ನುಡಿದು ಕೆಟ್ಟ ಕೇಡಿಂಗೆ ಕಡೆಯಿಲ್ಲ.