ವಿಷಯಕ್ಕೆ ಹೋಗು

ತನುವ ಗುರುವಿಂಗೆ ಸವೆವುದು

ವಿಕಿಸೋರ್ಸ್ದಿಂದ


Title vachana saahitya
Author Tomtada Siddalingeshwara ShivaYogigaLu
Year 1550-1600 AD
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ತನುವ ಗುರುವಿಂಗೆ ಸವೆವುದು ಶೀಲ; ಮನವ ಲಿಂಗಕ್ಕೆ ಸವೆವುದು ಶೀಲ; ಧನವ ಜಂಗಮಕ್ಕೆ ಸವೆವುದು ಶೀಲ; ತನುವ ಗುರುವಿಂಬುಗೊಂಬುದು ಶೀಲ; ಮನವ ಲಿಂಗವಿಂಬುಗೊಂಬುದು ಶೀಲ; ಧನವ ಜಂಗಮವಿಂಬುಗೊಂಬುದು ಶೀಲ; ಈ ತನು ಮನ ಧನದಲ್ಲಿ ನಿರ್ವಂಚಕನು ಶೀಲವಂತನಲ್ಲದೆ ಕಚ್ಚಿದ ಬದ್ಧ ಭವಿಯ ಶೀಲವಂತನೆಂತೆಂಬೆನಯ್ಯ?. ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ
ಮಾತಿನನೀತಿಯ ಶೀಲವಂತರ ಕಂಡು ಹೇಸಿತ್ತು ಮನ.