ತನುವಿನವಗುಣಂಗಳ ತರಿದೊಟ್ಟಿ ಮನದ ಮಾಯಾವಿಕಾರದ ಬಾಯ ಟೊಣೆದು ಕರಣಂಗಳ ಕತ್ತಲೆಯ ಕಡೆಗೊದ್ದು ಎಡಬಲಂಗಳ ತಡಹಿ ನಡುಮಧ್ಯಮಾರ್ಗವಿಡಿದು ಸುಷುಮ್ನಗಿರಿಯನಡರಿ ಕಡೆಮೊದಲಿಲ್ಲದೆ ಬೆಳಗಿನೊಳಗಡಗಿ ಬೆಳಗುತಿರ್ದೆನಾಗಿ ನಾನು ಪರಮಶಿವಯೋಗಿಯಾದೆನಯ್ಯಾ ಅಖಂಡೇಶ್ವರಾ.