ತನುವಿನವಗುಣಂಗಳ ಕರಣಂಗಳ ತರಿದೊಟ್ಟಿ,

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ತನುವಿನವಗುಣಂಗಳ ತರಿದೊಟ್ಟಿ
ಮನದ ಮಾಯಾವಿಕಾರದ ಬಾಯ ಟೊಣೆದು
ಕರಣಂಗಳ ಕತ್ತಲೆಯ ಕಡೆಗೊದ್ದು ಎಡಬಲಂಗಳ ತಡಹಿ
ನಡುಮಧ್ಯಮಾರ್ಗವಿಡಿದು ಸುಷುಮ್ನಗಿರಿಯನಡರಿ
ಕಡೆಮೊದಲಿಲ್ಲದೆ ಬೆಳಗಿನೊಳಗಡಗಿ ಬೆಳಗುತಿರ್ದೆನಾಗಿ ನಾನು ಪರಮಶಿವಯೋಗಿಯಾದೆನಯ್ಯಾ ಅಖಂಡೇಶ್ವರಾ.