ತಾನಿಲ್ಲದೆ ತಾ ಮಾಡುವ ಸಹಜನು ತಾನಿಲ್ಲದೆ ತಾ ನೀಡುವ ಸಹಜನು ತಾ ಬೇರಿಲ್ಲದೆ ಬೆರಸಿಹ ನಿಜಪದದೊಳು. ಏನೊಂದರ ಹಮ್ಮಿಲ[ದ] ಸಹಜ ಸುಜ್ಞಾನಿಯ ಮಾಟದ ಕೂಟದ ಸ್ಥಲದೊಳು ಕೂಡಿಹ ಕೂಡಲಸಂಗನನದೇನೆಂದುಪಮಿಸುವೆ.