ತ್ರಿವಿಧ ಲಿಂಗದಲ್ಲಿ ಸಮ............ ಶುದ್ಧ ಸಿದ್ಧ ಪ್ರಸಿದ್ಧವೆಂದು
ತ್ರಿವಿಧ ಪ್ರಸಾದವು. ಶುದ್ಧವು ಗುರುಭುಕ್ತಶೇಷ
ಸಿದ್ಧವು ಲಿಂಗಭುಕ್ತಶೇಷ. ಪ್ರಸಿದ್ಧವು ಜಂಗಮಭುಕ್ತಶೇಷ. ಇಂತೀ ತ್ರಿವಿಧ ಪ್ರಸಾದ
ಅಂತರಂಗ ಪ್ರಸಾದ ಇದಕ್ಕೆ ವಿವರ : ಅರ್ಪಿತ ಪ್ರಸಾದ...... ಆರೋಪಿತ ಪ್ರಸಾದ ಅಂತರಂಗದಲ್ಲಿ ತ್ರಿವಿಧ ಪ್ರಸಾದ. ಅರ್ಪಿತ ಪ್ರಸಾದವೆಂದು ಪಾಕ ಪ್ರಯಾ.... ವಾದ ಪದಾರ್ಥವನರ್ಪಿಸಿಕೊಂ...... ಅರ್ಪಿತ ಪ್ರಸಾದ. ಆ ... ಧಾರಿತ ಪ್ರಸಾದವೆಂದು ಪಾಕವಿಲ್ಲದ ಪದಾರ್ಥವನಾಧರಿಸಿಕೊಂಬುದು ಅವಧಾರಿತ ಪ್ರಸಾದ. ಆರೋಪಿತ ಪ್ರಸಾದವೆಂದು .......... .... ಪಂಚೇಂದ್ರಿಯವ ಸಾರೆ ಬಂದುದು ಆರೋಪಿತ ಪ್ರಸಾದ. ಇಂತಿದು ಪ್ರಸಿದ್ಧಪ್ರಸಾದ.. ಕಂಗಳ ಪೂಜೆ ಲಿಂಗ ಮನ ಮುಟ್ಟದಾರೋಗಣೆಯೆಂಬುದೇನೊ. ನಿಸ್ಸೀಮ ಶರಣಂಗೆ ಸೀಮೆಯೆಂಬುದೇನೋ
ಆತನ ನೆನಹೆ ಲಿಂಗಾರ್ಪಿತ
ಕೂಡಲಚೆನ್ನಸಂಗಮದೇವಾ.