Transclusion_Status_Detection_Tool

ತ್ರಿವಿಧ ಲಿಂಗದಲ್ಲಿ ಸಮ............

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು



Pages   (key to Page Status)   


ತ್ರಿವಿಧ ಲಿಂಗದಲ್ಲಿ ಸಮ............ ಶುದ್ಧ ಸಿದ್ಧ ಪ್ರಸಿದ್ಧವೆಂದು
ತ್ರಿವಿಧ ಪ್ರಸಾದವು. ಶುದ್ಧವು ಗುರುಭುಕ್ತಶೇಷ
ಸಿದ್ಧವು ಲಿಂಗಭುಕ್ತಶೇಷ. ಪ್ರಸಿದ್ಧವು ಜಂಗಮಭುಕ್ತಶೇಷ. ಇಂತೀ ತ್ರಿವಿಧ ಪ್ರಸಾದ
ಅಂತರಂಗ ಪ್ರಸಾದ ಇದಕ್ಕೆ ವಿವರ : ಅರ್ಪಿತ ಪ್ರಸಾದ...... ಆರೋಪಿತ ಪ್ರಸಾದ ಅಂತರಂಗದಲ್ಲಿ ತ್ರಿವಿಧ ಪ್ರಸಾದ. ಅರ್ಪಿತ ಪ್ರಸಾದವೆಂದು ಪಾಕ ಪ್ರಯಾ.... ವಾದ ಪದಾರ್ಥವನರ್ಪಿಸಿಕೊಂ...... ಅರ್ಪಿತ ಪ್ರಸಾದ. ಆ ... ಧಾರಿತ ಪ್ರಸಾದವೆಂದು ಪಾಕವಿಲ್ಲದ ಪದಾರ್ಥವನಾಧರಿಸಿಕೊಂಬುದು ಅವಧಾರಿತ ಪ್ರಸಾದ. ಆರೋಪಿತ ಪ್ರಸಾದವೆಂದು .......... .... ಪಂಚೇಂದ್ರಿಯವ ಸಾರೆ ಬಂದುದು ಆರೋಪಿತ ಪ್ರಸಾದ. ಇಂತಿದು ಪ್ರಸಿದ್ಧಪ್ರಸಾದ.. ಕಂಗಳ ಪೂಜೆ ಲಿಂಗ ಮನ ಮುಟ್ಟದಾರೋಗಣೆಯೆಂಬುದೇನೊ. ನಿಸ್ಸೀಮ ಶರಣಂಗೆ ಸೀಮೆಯೆಂಬುದೇನೋ
ಆತನ ನೆನಹೆ ಲಿಂಗಾರ್ಪಿತ
ಕೂಡಲಚೆನ್ನಸಂಗಮದೇವಾ.