ದಿಟದಾಕಾಶ ಘಟದಾಕಾಶ ಮಠದಾಕಾಶತ್ರಯಂಗಳಲ್ಲಿ ಹೋಗಲಿಕಸಾಧ್ಯ ಹೊರವಡಲಿಕಸಾಧ್ಯ. ಚಿತ್ತಾಕಾಶಂ ಚಿದಾಕಾಶಂ ಆಕಾಶಂ ಚ ತೃತೀಯಕಂ ದ್ವಾಭ್ಯಾಂ ಶೂನ್ಯತರಂ ವಿದ್ಧಿ ಚಿದಾಕಾಶಂ ವರಾನನೇ ಎಂಬುದಾಗಿ_ಆಕಾಶತ್ರಯ ಕೂಡಲಚೆನ್ನಸಂಗಾ. ನಿಮ್ಮ ಶರಣಂಗೆ ಸಾಧ್ಯ ಉಳಿದವರಿಗಸಾಧ್ಯ