ದೇವಸಾಲೆಯಲ್ಲಿ ದಿವ್ಯಮೂರ್ತಿಯ ಕಂಡೆನಯ್ಯಾ. ದೇವಸಾಲೆಯು ಅಳಿವುದಲ್ಲ; ದಿವ್ಯಮೂರ್ತಿಯು ಕೆಡುವುದಲ್ಲ. ಕೇಡಿಲ್ಲದ ಪರವಸ್ತು ತಾನೆಂದರಿದಾತನಲ್ಲದೆ ಶಿವಶರಣನಲ್ಲ ಕಾಣಾ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.