ದೇವಸಾಲೆಯಲ್ಲಿ ದಿವ್ಯಮೂರ್ತಿಯ ಕಂಡೆನಯ್ಯಾ.

ವಿಕಿಸೋರ್ಸ್ದಿಂದ



Pages   (key to Page Status)   


ದೇವಸಾಲೆಯಲ್ಲಿ ದಿವ್ಯಮೂರ್ತಿಯ ಕಂಡೆನಯ್ಯಾ. ದೇವಸಾಲೆಯು ಅಳಿವುದಲ್ಲ; ದಿವ್ಯಮೂರ್ತಿಯು ಕೆಡುವುದಲ್ಲ. ಕೇಡಿಲ್ಲದ ಪರವಸ್ತು ತಾನೆಂದರಿದಾತನಲ್ಲದೆ
ಶಿವಶರಣನಲ್ಲ ಕಾಣಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.