ನಂದಿವಾಹನನಾಗಿ ಚಂದ್ರಸೂರ್ಯಾಗ್ನಿ ನೇತ್ರದ ಅಂದ ಉಳ್ಳಾತನಾಗಿ ಸಂದಣಿಯಾಗಿ ನೆರೆದ ಪ್ರಮಥಗಣವೃಂದ ಉಳ್ಳಾತನಾಗಿ ನಿಂದು ಓಲೈಸುವ ದೇವಸಭೆಯ ಮುಂದೆ ಉಳ್ಳಾತನಾಗಿ ದುಂದುಭಿಯ ನಾದ ಮೊಳಗುತ್ತ ಕೋಟಿಕಂದರ್ಪನ ಸೌಂದರ್ಯವನೊಳಕೊಂಡು ಬಂದಿರಯ್ಯ ಎನ್ನ ಕರಸ್ಥಲಕ್ಕೆ ಅಖಂಡೇಶ್ವರಾ.