ನಂದಿವಾಹನನಾಗಿ, ನೆರೆದ ಚಂದ್ರಸೂರ್ಯಾಗ್ನಿ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ನಂದಿವಾಹನನಾಗಿ
ಚಂದ್ರಸೂರ್ಯಾಗ್ನಿ ನೇತ್ರದ ಅಂದ ಉಳ್ಳಾತನಾಗಿ
ಸಂದಣಿಯಾಗಿ ನೆರೆದ ಪ್ರಮಥಗಣವೃಂದ ಉಳ್ಳಾತನಾಗಿ
ನಿಂದು ಓಲೈಸುವ ದೇವಸಭೆಯ ಮುಂದೆ ಉಳ್ಳಾತನಾಗಿ
ದುಂದುಭಿಯ ನಾದ ಮೊಳಗುತ್ತ ಕೋಟಿಕಂದರ್ಪನ ಸೌಂದರ್ಯವನೊಳಕೊಂಡು ಬಂದಿರಯ್ಯ ಎನ್ನ ಕರಸ್ಥಲಕ್ಕೆ ಅಖಂಡೇಶ್ವರಾ.