ವಿಷಯಕ್ಕೆ ಹೋಗು

ನಿರಾಕಾರ ಪರವಸ್ತು ತಾನೇ

ವಿಕಿಸೋರ್ಸ್ದಿಂದ


Title vachana saahitya
Author Tomtada Siddalingeshwara ShivaYogigaLu
Year 1550-1600 AD
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ನಿರಾಕಾರ ಪರವಸ್ತು ತಾನೇ ಸದ್ರೂಪು ಚಿದ್ರೂಪು ಆನಂದ ಸ್ವರೂಪವೆಂದಾಯಿತ್ತು ನೋಡಾ. ಸತ್ತೇ ಶರಣಲಿಂಗವೆಂದೆ. ಚಿತ್ತೇ ಶಕ್ತಿಭಕ್ತಿಯೆಂದೆ. ಆನಂದವೇ ಹಸ್ತ ಮುಖ ಪದಾರ್ಥ ಪ್ರಸಾದವೆಂದೆ. ಹೀಂಗೆಂಬುವದು ವೇದ ಪ್ರಮಾಣವಲ್ಲ; ಆಗಮ ಪ್ರಮಾಣವಲ್ಲ; ಸ್ಮ ೃತಿ ಪ್ರಮಾಣವಲ್ಲ. ಅದೇನು ಕಾರಣವೆಂದರೆ
ಇದರಿಂದ ನಾನರಿದುದಿಲ್ಲ. ಮತ್ತೇತರಿಂದರಿದೆನೆಂದರೆ
ಶಿವಪ್ರಸನ್ನೇತಿಪ್ರಸಾದದಿಂದರಿದು ಕಣ್ದೆರೆದು
ಸಚ್ಚಿದಾನಂದ ನಿತ್ಯ ಪರಿಪೂರ್ಣ ಪರಶಿವತತ್ತ್ವ ಸ್ವರೂಪವೇ ಶರಣನೆಂಬ ವಾಕ್ಯ ಸತ್ಯ ನೋಡಯ್ಯಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.