ನೀರೊಳಗಣ ಪಾವಕನೆದ್ದುರಿಯಲು ಮೇರುಗಿರಿ ಬೆಂದುದ ಕಂಡನಯ್ಯ. ಊರಳಿದು ಉಲುಹಡಗಿ ಮಾರಿಮಸಣಿಯರು ಮಡಿದುದು ಸೋಜಿಗ ಕಾಣಾ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.