ಬಂಜೆ ಬೇನೆಯನರಿಯದಂತೆ ಒಬ್ಬರೊಂದ ನುಡಿವಿರಿ ಕೇಳಿರಯ್ಯಾ. ಎನಗೆ ಆಯುಷ್ಯ ಭವಿಷ್ಯ ಎನ್ನ ಭಕ್ತರು. ಎನಗೆ ಆಯುಷ್ಯ ಭವಿಷ್ಯ ಎನ್ನ ಪ್ರಮಥರು ಕಂಡಯ್ಯಾ. ಕೂಡಲಸಂಗನ ಶರಣರು ಮುಖಲಿಂಗಿಗಳಯ್ಯಾ. 410