ವಿಷಯಕ್ಕೆ ಹೋಗು

ಬಂಜೆ ಬೇನೆಯನರಿಯದಂತೆ ಒಬ್ಬರೊಂದ

ವಿಕಿಸೋರ್ಸ್ದಿಂದ


ಲೇಖಕರು: ಬಸವಣ್ಣ
ಶೀರ್ಷಿಕೆ: vachana saahitya
ವರ್ಷ: 1191 AD
ಪ್ರಕಾಶಕರು: anubhava mantapa
ಮೂಲ: vachana saahitya

ಬಂಜೆ ಬೇನೆಯನರಿಯದಂತೆ ಒಬ್ಬರೊಂದ ನುಡಿವಿರಿ
ಕೇಳಿರಯ್ಯಾ. ಎನಗೆ ಆಯುಷ್ಯ ಭವಿಷ್ಯ
ಎನ್ನ ಭಕ್ತರು. ಎನಗೆ ಆಯುಷ್ಯ ಭವಿಷ್ಯ
ಎನ್ನ ಪ್ರಮಥರು ಕಂಡಯ್ಯಾ. ಕೂಡಲಸಂಗನ ಶರಣರು ಮುಖಲಿಂಗಿಗಳಯ್ಯಾ. 410