ವಿಷಯಕ್ಕೆ ಹೋಗು

ಲಿಂಗದೇಹಿಯಾದ ಬಳಿಕ ಲಿಂಗೈಕ್ಯನಾಗದನ್ನಕ್ಕ

ವಿಕಿಸೋರ್ಸ್ದಿಂದ


Title vachana saahitya
Author ChennaBasavanna
Year 1144-1168 AD
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ಲಿಂಗದೇಹಿಯಾದ ಬಳಿಕ ಲಿಂಗೈಕ್ಯನಾಗದನ್ನಕ್ಕ ಲಿಂಗದೇಹಿ ಎಂತಹನೋ ಅಯ್ಯಾ ? ಲಿಂಗದೇಹಿಯಾದ ಬಳಿಕ ಲಿಂಗಾಂಗರ ಕೂಡ ಗೋಷಿ* ಲಿಂಗಾಂಗರ ಕೂಡ ಸಂಗತಿ ಲಿಂಗಾಂಗರ ಕೂಡ ಸನ್ನಿಧಿ ಲಿಂಗಾಂಗರ ಕೂಡ ನಡೆ ನುಡಿ. ಲಿಂಗಾಂಗಿಗಳಲ್ಲದ ಲಿಂಗಹೀನರ ಕೂಡ ಸಂಗವ ಬೆರಸಿ ನಡೆದರೆ ಆತಂಗೆ ಗುರುವಿಲ್ಲ ಲಿಂಗವಿಲ್ಲ ಜಂಗಮವಿಲ್ಲ ಪಾದತೀರ್ಥ ಪ್ರಸಾದವಿಲ್ಲ ಕಾಣಾ
ಮಹಾದಾನಿ ಕೂಡಲಚೆನ್ನಸಂಗಮದೇವಾ