ವಿಷಯದ ಸುಖ ವಿಷವೆಂದರಿಯದ ಮರುಳೆ ವಿಷಯಕ್ಕೆ ಅಂಗವಿಸದಿರಾ. ವಿಷಯದಿಂದ ಕೆಡನೆ ರಾವಣನು ವಿಷಯದಿಂದ ಕೆಡನೆ ದೇವೇಂದ್ರನು ? ವಿಷಯದಿಂದಾರು ಕೆಡರು ಮರುಳೆ ? ವಿಷಯ ನಿರ್ವಿಷಯವಾಯಿತ್ತೆನಗೆ ನಿನ್ನಲ್ಲಿ. ಚೆನ್ನಮಲ್ಲಿಕಾರ್ಜುನಂಗೆ ಒಲಿದವಳ ನೀನಪ್ಪಿಹೆನೆಂದಡೆ ಒಣಗಿದ ಮರನಪ್ಪುವಂತೆ ಕಾಣಾ